ಕುಷ್ಟಗಿಗೆ ಮರಳಿದ ‘ದಕ್ಷ’ ಸಿಪಿಐ: ವಿಶ್ವನಾಥ ಹಿರೇಗೌಡರ್
ಹನುಮಸಾಗರದ ಇಸ್ಪೀಟ್ ಅಡ್ಡೆ, ಮರಳು ದಂಧೆಗೆ ಬೀಳುವುದೇ ಬ್ರೇಕ್?
[ವಿಶೇಷ ವರದಿ, ಕುಷ್ಟಗಿ]
ಕುಷ್ಟಗಿ:ಈ ಹಿಂದೆ ಪಿಎಸ್ಐ ಆಗಿ ಜನಸ್ನೇಹಿ ಮತ್ತು ಖಡಕ್ ಆಡಳಿತ ನೀಡಿ ಜನರ ಮನಗೆದ್ದಿದ್ದ ಅಧಿಕಾರಿ ವಿಶ್ವನಾಥ ಹಿರೇಗೌಡರ ಅವರು ಇದೀಗ ಬಡ್ತಿ ಪಡೆದು ಸಿಪಿಐ ಆಗಿ ಕುಷ್ಟಗಿ ವೃತ್ತಕ್ಕೆ ಮರಳಿದ್ದಾರೆ. ಇವರ ಆಗಮನ ದಂಧೆಕೋರರಲ್ಲಿ ನಡುಕ ಹುಟ್ಟಿಸಿದ್ದರೆ, ಸಾರ್ವಜನಿಕರಲ್ಲಿ ಅಕ್ರಮಗಳಿಗೆ ಅಂತ್ಯ ಹಾಡುತ್ತಾರೆಂಬ ಭರವಸೆ ಮೂಡಿಸಿದೆ.
ಹಳೆಯ ಇತಿಹಾಸ: ಮದ್ಯಮುಕ್ತ ಗ್ರಾಮಗಳ ರೂವಾರಿ ವಿಶ್ವನಾಥ ಹಿರೇಗೌಡರ ಅವರು ಈ ಹಿಂದೆ ಕುಷ್ಟಗಿಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸಿದ್ದಾಗ, ಕೇವಲ ಲಾಠಿ ಹಿಡಿದು ದಂಡಿಸುವುದಕ್ಕೆ ಸೀಮಿತವಾಗದೆ ಸಮಾಜ ಸುಧಾರಣೆಗೆ ಒತ್ತು ನೀಡಿದ್ದರು. ಗ್ರಾಮೀಣ ಭಾಗದಲ್ಲಿ ಮದ್ಯಪಾನದ ಹಾವಳಿ ತಡೆಗಟ್ಟಲು ಇವರು ನಡೆಸಿದ ‘ಮದ್ಯ ವ್ಯಸನಮುಕ್ತ ಗ್ರಾಮ’ ಅಭಿಯಾನ ರಾಜ್ಯಮಟ್ಟದಲ್ಲಿ ಗಮನ ಸೆಳೆದಿತ್ತು. ಜನರೊಂದಿಗೆ ಬೆರೆತು, ಸಂಸಾರಗಳನ್ನು ಉಳಿಸುವ ಕೆಲಸ ಮಾಡಿದ್ದ ಹಿರೇಗೌಡರ ಮೇಲೆ ಜನರಿಗೆ ಇಂದಿಗೂ ಅಪಾರ ಗೌರವವಿದೆ. ಪ್ರಸ್ತುತ ಸವಾಲು ಹನುಮಸಾಗರದಲ್ಲಿ ಜೂಜಾಟದ ಅಬ್ಬರ ಸದ್ಯ ಕುಷ್ಟಗಿ ತಾಲೂಕಿನ ಹನುಮಸಾಗರ ಭಾಗದಲ್ಲಿ ಇಸ್ಪೀಟ್ ಜೂಜಾಟ ಯಾವುದೇ ಅಂಜಿಕೆ ಇಲ್ಲದೆ ಹಾಡುಹಗಲೇ ನಡೆಯುತ್ತಿದೆ ಎನ್ನುವ ದೂರುಗಳು ಕೇಳಿಬರುತ್ತಿವೆ. ಹನುಮಸಾಗರದಲ್ಲಿ ಪೊಲೀಸ್ ಠಾಣೆ ಇದ್ದರೂ ಸಹ, ದಂಧೆಕೋರರು ಕಾನೂನಿನ ಕಣ್ಣಿಗೆ ಮಣ್ಣೆರಚಿ ಅಡ್ಡೆಗಳನ್ನು ನಡೆಸುತ್ತಿದ್ದಾರೆ. ಇದು ಯುವ ಸಮೂಹವನ್ನು ದಾರಿ ತಪ್ಪಿಸುತ್ತಿದ್ದು, ಕುಟುಂಬಗಳು ಬೀದಿಗೆ ಬೀಳುವ ಭೀತಿ ಎದುರಾಗಿದೆ. ಮರಳು ದಂಧೆಯ ಕಬಂಧ ಬಾಹು ಇಸ್ಪೀಟ್ ಮಾತ್ರವಲ್ಲದೆ, ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆಯೂ ಅವ್ಯಾಹತವಾಗಿ ನಡೆಯುತ್ತಿದೆ. ನೈಸರ್ಗಿಕ ಸಂಪತ್ತಿನ ಲೂಟಿ ಮಾಡುತ್ತಿರುವ ದೊಡ್ಡ ಜಾಲವೇ ಇಲ್ಲಿ ಸಕ್ರಿಯವಾಗಿದೆ. ಈ ಹಿಂದಿನಂತೆಯೇ ಹಿರೇಗೌಡರ ಅವರು ಈ ಅಕ್ರಮ ಮರಳು ದಂಧೆಕೋರರ ಹೆಡೆಮುರಿ ಕಟ್ಟುವರೇ ಎಂಬ ಕುತೂಹಲ ಸಾರ್ವಜನಿಕ ವಲಯದಲ್ಲಿದೆ. ಜನರ ನಿರೀಕ್ಷೆ ಏನು? “ಹಿರೇಗೌಡರ ಅವರು ಬಂದರೆ ಅನ್ಯಾಯಕ್ಕೆ ಅವಕಾಶ ಇರುವುದಿಲ್ಲ” ಎಂಬ ಮಾತು ತಾಲೂಕಿನ ಜನಜನಿತ. ಈ ಹಿಂದಿನಂತೆಯೇ ಅವರು: * ಹನುಮಸಾಗರ ಭಾಗದ ಜೂಜಾಟಕ್ಕೆ ಪೂರ್ಣವಿರಾಮ ಇಡಬೇಕು. * ರಾತ್ರಿ ಬೆಳಗಾಗುವುದರೊಳಗೆ ನಡೆಯುವ ಮರಳು ಅಕ್ರಮ ದಂಧೆ ನಿಲ್ಲಿಸಬೇಕು.- ಠಾಣಾ ಮಟ್ಟದಲ್ಲಿ ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಬೇಕು.
Discover more from somekranti.com
Subscribe to get the latest posts sent to your email.